thumbnail

ಪ್ರೀತಿಯ ಆಸರೆ

-  ನವಿಲೆ ಶಾಲು

ಪ್ರೀತಿಯ ಆಸರೆ ಬೇಡುತ ಬಂದಿಹ
ತಂಪಿನ ತಳಿರುಗಳೆ
ಕೇಳಿರಿ ನನ್ನಯ ನಿರ್ಮಲ ಪ್ರೀತಿಯ
ಹಂಚುವೆ ನಿಮ್ಮೊಳಗೆ
ಹನಿಹನಿ ಬಿಂದುವ ಜೋಡಿಸಿಕೊಂಡಿಹ
ಹಸುರಿನ ಸೀರೆಯಲಿ
ನನದೇ ಕುಸುರಿಯ ಚಿತ್ರವ ಬಿಡಿಸಲು
ಕಾದಿಹೆ ತವಕದಲಿ

ತಳಿರುಗಳೆಲೆಯಲಿ ಬಣ್ಣವ ತುಂಬಲು
ಬಂದನು ನೇಸರನು
ಕಿರಣವ ಬೀರುತ ಕಾಂತಿಯ ತುಂಬಲು
ಕಾತರ  ಪಡುತಿಹನು

ಎಲೆಗಳ ಚುಂಬಿಸ ಬರುತಿಹ ಕಿರಣಕೆ
ಇನ್ನೇನ ನಾ ಕೊಡುವೆ
ನಿರ್ಮಲ ಮನಸನೆ ಎರೆಯುವ ಬಯಕೆಗೆ
ನನ್ನ ನಾ ಮುಡಿಪಿಡುವೆ
    
Powered by Blogger.